'KGF' ಸರಣಿ ಸಿನಿಮಾಗಳಿಂದ ನಟ ಯಶ್ ಕ್ರೇಜ್ ಯಾವ ಮಟ್ಟಿಗೆ ಹೆಚ್ಚಾಯ್ತು ಎಂದು ಬಿಡಿಸಿ ಹೇಳುವುದು ಬೇಕಿಲ್ಲ. ಸದ್ಯ ಅದನ್ನು ಮೀರಿಸುವ ಚಿತ್ರ ಮಾಡಲು ಯಶ್ ಮುಂದಾಗಿದೆ. 'ಟಾಕ್ಸಿಕ್' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ.
ಅಭಿಮಾನಿಗಳು 'ಟಾಕ್ಸಿಕ್' ಅಪ್‌ಡೇಟ್ ಕೇಳುತ್ತಲೇ ಇದ್ದಾರೆ. ಇನ್ನು ಯಶ್ ಮಾತ್ರ 'KGF' ಲುಕ್ ಇನ್ನು ಬದಲಿಸಿಲ್ಲ. ಗಡ್ಡಧಾರಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದಿನ ಚಿತ್ರದಲ್ಲಿ ಕೂಡ ಅದೇ ಲುಕ್ ಮುಂದುವರೆಯುವ ಸಾಧ್ಯತೆಯಿದೆ. ರಾಕಿಭಾಯ್ ಆಗಿ ಏಕ್‌ದಮ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಯಶ್ ಅಬ್ಬರಿಸಿದರು. 'ಬಾಹುಬಲಿ' ಸರಣಿಯಿಂದ ಪ್ರಭಾಸ್‌ಗೆ ಸಿಕ್ಕಂತಹ ನೇಮು ಫೇಮು ರಾಕಿಂಗ್ ಸ್ಟಾರ್‌ಗೂ ಸಿಕ್ತು.